ಅರಬ್ಬೀ ಛಂದಸ್ಸು	
	
ಅರಬ್ಬೀ ಭಾಷೆಯಲ್ಲಿ ಛಂದಸ್ಸನ್ನು ಮೊದಲು ಪ್ರಯೋಗಿಸಿದವ ಬಾಸ್ರದ ಅಹಮದ್‍ನ ಮಗ ಖಲೀಲ್ (ಕ್ರಿ.ಶ. 718-19; ಅವನ ಜನನ ಮರಣಗಳೆರಡೂ ನಡೆದುದು ಭಾನುವಾರವೇ). ಒಮ್ಮೆ ಬಾಸ್ರ ನಗರದ ಕಂಚುಗಾರರ ಬೀದಿಯಲ್ಲಿ ಹೋಗುತ್ತಿದ್ದಾಗ ಯಾವನೋ ತಟ್ಟೆಯೊಂದರ ಮೇಲೆ ಸುತ್ತಿಗೆಯಿಂದ ಬಡಿದ, ಅದರಿಂದ ಉಂಟಾದ ನಾದದ ಸ್ಪಂದನವನ್ನು ಕೇಳಿ ಖಲೀಲ್ ಸಂತೋಷದಿಂದ ನೆಗೆಯುತ್ತ ತನಗೆ ಆ ಕ್ಷಣದಲ್ಲಿ ಹೊಳೆದ ಹೊಸ ವಿಷಯವೊಂದರ ಬಗ್ಗೆ ತೀವ್ರವಾಗ ಆಲೋಚಿಸಿ, ಅಂದಿನಿಂದ ಸ್ವರಮೇಳದ ಸಾಧ್ಯತೆಯನ್ನು ಕುರಿತು ಕನಸುಕಾಣತೊಡಗಿದ.

ಅರಬ್ಬೀ ಭಾಷೆಯ ಶಬ್ದರಚನೆ ಫ, ಅ, ಲ ಎಂಬ ಮೂರು ಅಕ್ಷರಗಳ ತಳಹದಿಯ ಮೇಲೆ ನಿಂತಿದೆ. ಒಂದಾದ ಮೇಲೊಂದರಂತೆ ಬರುವ ಹೊಡೆತಗಳಿಂದಲೂ ಆ ಮೂರು ಅಕ್ಷರಗಳ ಮೇಲೆ ನಿರ್ದಿಷ್ಟ  ಪ್ರಮಾಣದಲ್ಲಿ ಯತಿಯನ್ನು ಹಾಕುವುದರಿಂದಲೂ ಆತ ಛಂದಸ್ಸಿನ ಲಯಗಳನ್ನು ಗೊತ್ತುಪಡಿಸಿದ.

ಛಂದಸ್ಸು ಸಂಗೀತದ ಶಿಶು. ತಂತಿಯೊಂದನ್ನು ಮೀಟುವ ಸಾಧನದಿಂದ ಬಡಿದಾಗ ಸ್ವರವೊಂದರ ಉತ್ಪನ್ನವಾಗುತ್ತದೆ. ಇದು ಪ್ರತಿನಿಧಿಸುವುದು ಚಲಿತಾಕ್ಷರವೊಂದನ್ನು(ಎಂದರೆ ತ ವನ್ನು (‰). ಆ ಸ್ವರ ನಿಲ್ಲುವ ಅಕ್ಷರಕ್ಕೆ ಜಡಾಕ್ಷರವೆಂದು ಹೆಸರು. ತನ್(-) ಅಕ್ಷರ ಸಂಯೋಜನೆಯಲ್ಲಿರುವ ನ್ ಇಂಥ ಅಕ್ಷರ. ಉದಾಹರಣೆಗೆ ನಾವು ಮ ಫಾ|ಈ|ಲುನ್ (‰ ---) ಎಂಬ ಗಣವನ್ನು ಉಚ್ಚಿರಸಬೇಕಾದರರೆ ಮೊದಲು ಅನುಕ್ರಮವಾಗಿ ಎರಡು ಸಾರಿ ಬಡಿಯಬೇಕು. ಈ ಎರಡೂ ಸ್ವರಗಳೂ ಕೊನೆಯಲ್ಲಿ ಬರುವ ಜಡಾಕ್ಷರವೂ ಸೇರಿ ಮ ಫಾ ಗೆ (‰-) ಸಮವಾಗುತ್ತದೆ.  ಅನಂತರ ಒಂದು ಕ್ಷಣ ಬಿಟ್ಟು ಮೂರನೆಯ ಬಾರಿ ಬಡಿದಾಗ ಒಂದು ಚಲಿತಾಕ್ಷರ ವ್ಯಂಜನವೂ ಅದರ ಹಿಂದೆಯೆ ಒಂದು ಜಡಾಕ್ಷರವೂ ಎಂದರೆ, ಈ (-) ಬರುತ್ತವೆ. ಇದಾದ ಅನಂತರ ನಾಲ್ಕನೆಯ ಪೆಟ್ಟು ಬೀಳುತ್ತದೆ. ಅದು ಲುನ್‍ಗೆ(-) ಸಮವಾದುದು. ಪದ್ಯಪಂಕ್ತಿಯೊಂದರ ಗಣಗಳಲ್ಲಿ ಪ್ರತಿಯೊಂದೂ ರೂಪಿತವಾಗುವುದು ಹೀಗೆಯೆ.

ಸಂಗೀತಗಾರರು ತಮ್ಮ ಗಾಯನಕ್ಕೆ ಮುಖ್ಯವಾಗಿ ತ ಮತ್ತು ನ ಎಂಬ ಅಕ್ಷರಗಳನ್ನು ಅವಲಂಬಿಸಿರುತ್ತಾರೆ.  ಗಾಯನದಲ್ಲಿ ಮ ಫಾ|ಈ|ಲುನ್ ತನನ್|ತನ್| ತನ್ (‰---) ಎಂದು ಪರಿವರ್ತನ ಹೊಂದುತ್ತದೆ. ಚಲಿತಾಕ್ಷರ ಮತ್ತು ಜಡಾಕ್ಷರಗಳ ಸಂಯೋಜನೆಯಿಂದ ರಚಿತವಾದ ಪದಗಳು ಅವ್ಯಯಗಳೆಂದು ಕರೆಯಲ್ಪಡುತ್ತವೆ. ಇಂಥ ಅವ್ಯಯಗಳು ಮೂರು, ಅವುಗಳಲ್ಲಿ ಒಂದೊಂದರಲ್ಲೂ ಎರಡು ವರ್ಗಗಳುಂಟು. ಆದ್ದರಿಂದ ಅವುಗಳ ಸಂಖ್ಯೆ ಒಟ್ಟು ಆರು.

1 ಸಬಬ್: 1 ಇದರಲ್ಲಿ ಚಲಿತಾಕ್ಷರ ವ್ಯಂಜನದ ಅನಂತರ ಒಂದು ಜಡಾಕ್ಷರ ಬರುತ್ತದೆ((ಸಬಬ್-ಎ-ಖಫೀಫ್ ಅಥವಾ ಲಘು ಸಬಬ್) ಉದಾಹರಣೆಗೆ, ತನ್ (-). 2 ಅಥವಾ ಇನ್ನೊಂದು ಚಲಿತಾಕ್ಷರವೂ ಬರಬಹುದು. ಉದಾರಣೆಗೆ, ತನ (‰‰ )(ಸಬಬ್-ಎ-ಮಫರೂಕ್, ಪ್ರತ್ಯೇಕವಾಗಿರುವ ವತದ್ ಎಂದು ಹೆಸರು.

2 ವತದ್: 1 ಚರಾಕ್ಷರಗಳು ಎರಡನ್ನು ಒಳಗೊಂಡಿರುವ ಒಂದು ಅವ್ಯಯ ಅದರ ಹಿಂದೆಯೆ ಒಂದು ಜಡಾಕ್ಷರ (ವತದ್-ಎ-ಮಜಮೂ ಅಥವಾ ಸಂಕಲಿತ ವತದ್); ಉದಾಹರಣೆಗೆ, ತನ (‰-). 2 ಅವ್ಯಯವೊಂದರ ಎರಡು ಚರ ಅಕ್ಷರಗಳ ಮಧ್ಯೆ ಜಡಾಕ್ಷರವೊಂದು ಬಂದು ಅವನ್ನು ಬೇರ್ಪಡಿಸಬಹುದು; ಉದಾಹರಣೆಗೆ, ತನ್ ನ (-‰). ಇದಕ್ಕೆ ವತದ್-ಎ-ಮಫರೂಕ್, ಪ್ರತ್ಯೇಕವಾಗಿರುವ ವತದ್ -ಎ-ಮಫರೂಕ್, ಪ್ರತ್ಯೇಕವಾಗಿರುವ ವತದ್ ಎಂದು ಹೆಸರು 

3 ಫಾಸಿಲ: 1 ಮೊದಲು ಮೂರು ಚಲಿತಾಕ್ಷರಗಳು ಅನಂತರ ಒಂದು ಜಡಾಕ್ಷರ; ಉದಾಹರಣೆಗೆ, ತನನನ್ (‰‰-) (ಫಾಸಿಲ-ಎ-ಸುಗರಾ ಅಥವಾ ಕಡಿಮೆ ಸ್ಥಳ). 2 ನಾಲ್ಕು ಚಲಿತಾಕ್ಷರಗಳು ಅನಂತರ ಒಂದು  ಜಡಾಕ್ಷರ; ಉದಾಹರಣೆಗೆ ತನನನನ್ (‰‰‰-). (ಫಾಸಿಲ-ಎ-ಕುಬ್ರಾ ಅಥವಾ ಹೆಚ್ಚಿನ ಸ್ಥಳ).
ಈ ಆರು ಅವ್ಯಯಗಳೆಲ್ಲವುಗಳ ಸಂಯೋಜನೆ ಹೀಗಾಗುತ್ತದೆ:

ಲಮ್ ಅರ ಅಲಾ ರಾಸಿ ಜಬಲಿನ್ ಸಮಕತನ್
-‰‰ ‰-  -‰  ‰‰-  ‰‰‰-
ತನ್ ತನ ತನನ್ ತನ್‍ನ ತನನನ್ ತನನನನ್

ನನಗೆ ಬೆಟ್ಟದ ತುತಿಯಲ್ಲಿ ಒಂದಾದರೂ ಮೀನು ಕಾಣಿಸಲಿಲ್ಲ ಎಂಬುದು ಈ ಸಾಲಿನ ಅರ್ಥ.
ಈ ಆರು ಅವ್ಯಯಗಳಲ್ಲಿ ಕನಿಷ್ಠ ಪಕ್ಷಕ್ಕೆ ಎರಡು, ಹೆಚ್ಚೆಂದರು ಮೂರು ಅವ್ಯಯಗಳು ಸೇರಿದರೆ ಪದ್ಯಪಂಕ್ತಿಯ ಒಂದು ಗಣವಾಗುತ್ತದೆ.  ಪದ್ಯದ ಪ್ರತಿ ಪಂಕ್ತಿಯಲ್ಲೂ ಎರಡು ಭಾಗಗಳಿದ್ದು ಅವುಗಳಲ್ಲಿ ಒಂದೊಂದರಲ್ಲೂ ಒಂದಕ್ಕೆ ಕಡಿಮೆಯಿಲ್ಲದಂತೆ ನಾಲ್ಕಕ್ಕೆ ಹೆಚ್ಚಿಲ್ಲದಂತೆ ಗಣಗಳಿರಬೇಕು.  ಅತ್ಯಂತ ಹೆಚ್ಚೆಂದರೆ ಎಂಟು ಗಣಗಳಿರಬಹುದು.  ತತ್ಫಲವಾಗಿ ಒಂದು ಪದ್ಯಪಂಕ್ತಿಯಲ್ಲಿ ಎರಡು, ನಾಲ್ಕು, ಆರು , ಅಥವಾ ಎಂಟು ಅಥವಾ ಹದಿನಾರು ಗಣಗಳಿರಬೇಕು. ಅತ್ಯಂತ ಹೆಚ್ಚಿಂದರೆ ಎಂಟು ಅಥವಾ ಹದಿನಾರು ಗಣಗಳಿರಬಹುದು. ಆಧುನಿಕ ಕವಿಗಳು ಅರವತ್ತುನಾಲ್ಕು ಗಣಗಳಿರುವ ಅರ್ಥಪಂಕ್ತಿಗಳನ್ನೂ ರಚಿಸಿದ್ದಾರೆ.  ಇದಕ್ಕೆ ಬಹ್-ರ-ಎ-ತಮೀಲ್ ಎಂದು ಹೆಸರು. ಬಹ್-ರ ಎಂದರೆ ಛಂದಸ್ಸು ಎಂದರ್ಥ.

ಎರಡು ಅಥವಾ ಹೆಚ್ಚೆಂದರೆ ಮೂರು ಅವ್ಯಯಗಳನ್ನು ಸೇರಿಸಿ ಗಣವೊಂದನ್ನು ಹತ್ತು ರೀತಿಯಲ್ಲಿ ರೂಪಿಸಬಹುದು.  ಈ ಹತ್ತು ರೀತಿಗಳನ್ನು ನಾಲ್ಕು ಪಂಗಡಗಳಾಗಿ ಹೀಗೆ ವಿಂಗಡಿಸಬಹುದು.

I i ಒಂದು ವತದ್ (ಮೊದಲನೆಯದು), ತನನ್ (‰-/) ಮತ್ತು ಎರಡು ಸಬಬ್‍ಗಳು (ಮೊದಲನೆಯವು), ತನ್ (-) ಇವನ್ನು ಜೋಡಿಸಿ ಒಂದೊಂದೂ ಮೂರು ಅವ್ಯಯಗಳನ್ನೊಳಗೊಂಡಿರುವ ಯದು ಗಣಗಳನ್ನು ನಿರ್ಮಿಸಬಹುದು.  ಹೀಗೆ ರಚಿತವಾದ ಮೂಲಗಣ ಮಫಾ|ಈ|ಲುನ್ (‰-/-/-) ತನನ್|ತನ್|ತನ್ ಎಂದಾಗುತ್ತದೆ.  ಇದು ಹಜಸ್ ಎಂಬ ಛಂದಸ್ಸಿನಲ್ಲಿ ಒಂದು ಗಣವಾಗುತ್ತದೆ.

ii ಎ. ಮೂಲಗಣವನ್ನು ಎರಡನೆಯ ಅವ್ಯಯದಿಂದ ಹಿಡಿದು ಓದಿದರೆ ಮೊದಲನೆಯ ಅವ್ಯಯವನ್ನು ಕೊನೆಗೆ ಓದಬೇಕಾಗುತ್ತದೆ. ಉದಾಹರಣೆಗೆ ಈ|ಲುನ್|ಮಫಾ. ಇದು ಬದಲಾಗಿ ಮುಸ್|ತಫ್|ಇಲುನ್=ತನ್|ತನ್|ತನನ್=(|-|‰- ಎಂದಾಗುತ್ತದೆ. ಈ ಛಂದಸ್ಸಿಗೆ ರಜಸ್ ಎಂದು ಹೆಸರು.

ii ಬಿ. ಈ ಗಣದಲ್ಲಿ ಮೇಲೆ ಹೇಳಿದ ಮುಸ್|ತಫ್|ಇಲುನ್ ಎಂಬ ಗಣದ ಎರಡನೆಯ ಅವ್ಯಯ ಮೊದಲನೆಯ ಸಬಬ್ ಆಗಿ ಮೂರನೆಯ ಅವ್ಯಯ ಮೊದಲನೆಯ ವತದ್ ಆಗುತ್ತದೆ. ಇವೆರಡನ್ನೂ ತಫ್ ಇ|ಲುನ್ ಎಂದೂ ಓದಬಹುದು. ಹೀಗೆ ಮಾಡಿದಾಗ ಮೊದಲನೆಯ ಸಬಬ್ ಎರಡನೆಯ ವತದ್ ಅಗಿಯೂ ಮೊದಲನೆಯ ವತದ್ ಮೊದನೆಯ ಸಬಬ್ ಆಗಿಯೂ ಬದಲಾವಣೆ ಹೊಂದುತ್ತವೆ. ತತ್ಫಲವಾಗಿ ಮುಸ್||ತಫ್|ಇಲುನ್ ಅಥವಾ ತನ್|ತನ್ನ|ತನ್ ಅಥವಾ (ಗೊತ್ತಿಲ್ಲ) ಆಗುತ್ತದೆ.

iii ಎ. ಮೂಲಗಣವನ್ನು ಮೂರನೆಯ ಅವ್ಯಯದಿಂದ ಓದಿದರೆ ಮೊದಲನೆಯ ಮತ್ತು ಎರಡನೆಯ ಅವ್ಯಯಗಳು ಎರಡನೆಯ ಮತ್ತು ಮೂರನೆಯ ಅವ್ಯಯಗಳಾಗುತ್ತವೆ. ಈ ರೀತಿ:
ಲನ್|ಮ ಫಾ|ಈ=ತನ್=ತನನ್|ತನ್
ಇದಕ್ಕೆ ಪ್ರತಿಯಾಗಿ ಫಾ|ಇಲಾ|ತುನ್=ತನ್|ತನನ್|ತನ್ ಬರುತ್ತವೆ. ಈ ಛಂದಸ್ಸು ರಮಲ್.

iii  ಬಿ. ಇಲ್ಲಿ ಫಾ| ಇಲಾ (ಒಂದನೆಯ ಸಬಬ್ ಮತ್ತು ಒಂದನೆಯ ವತದ್‍ಗಳು) ಫಾ ಇ |ಲಾ ಆಗುತ್ತದೆ. (ಎರಡನೆಯ ವತದ್ ಮತ್ತು ಮೊದಲನೆಯ ಸಬಬ್). ಆದ್ದರಿಂದ ತನ್|ತನನ್|ತನ್ ಇವು ತನ್‍ನ|ತನ್|ತನ್ ಆಗುತ್ತದೆ.

II ಎರಡು ಗಣಗಳನ್ನು ಎರಡು ಅವ್ಯಯಗಳಿಂದಲೇ (ಎಂದರೆ ಒಂದನೆಯ ವತದ್ ಒಂದು, ಒಂದನೆಯ ಸಬಬ್ ಒಂದು) ನಿರ್ಮಿಸಬಹುದು. ಉದಾಹರಣೆಗೆ, ಫ ಊ|ಲುನ್, ಈ ಮೂಲಗುಣವನ್ನು ತಿರುಗುಮುರುಗು ಮಾಡಿದರೆ ಲುನ್|ಫ ಊ ಆಗುತ್ತದೆ. ಅದಕ್ಕೆ ಬದಲಾಗಿ ಫಾ ಇಲುನ್ ಬರಬಹುದು.
6 ಫ ಊ |ಲುನ್ =ತನನ್|ತನ್ = ‰-/- ಛಂದಸ್ಸು(ಮುತಾಕರಿಬ್.
7 ಫಾ | ಇಲುನ್= ತನ್ | ತನನ್ =/‰- ಛಂದಸ್ಸು(ಮುತದಾರಿಕ್.

III ಎರಡು ಅವ್ಯಯಗಳನ್ನು ಉಪಯೋಗಿಸಿಕೊಂಡು ಎರಡು ಗಣಗಳನ್ನು ರಚಿಸಬಹುದು (ಎಂದರೆ, ಮೊದಲನೆಯ ವತದ್, ಮೊದಲನೆಯ ಫಸಿಲಾ). ಉದಾಹರಣೆಗೆ, ಮಫಾ| ಇಲತುನ್.  ಈ ಮೂಲಗಣವನ್ನು ಮಗಚಿ ಹಾಕಿದರೆ ಇಲತುನ್ | ಮಫಾ ಆಗುತ್ತದೆ. ಅದಕ್ಕೆ ಬದಲಾಗಿ ಮುತಫಾ | ಇಲುನ್ ಬರಬಹುದು.

8 ಮಫಾ | ಇಲತುನ್ = ತನನ್| ತನತನ್= ‰‰-‰-/ ಛಂದಸ್ಸು(ವಾಫಿರ್.

9 ಮುತಾಫಾ| ಇಲುನ್ = ತನತನ್ | ತನನ್|=‰‰-‰-/ ಛಂದಸ್ಸು (ಕಾಮಿಲ್.
ಈ ಒಂಬತ್ತು ಗಣಗಳೂ ಒಂದೊಂದೂ ಒಂದು ಛಂದಸ್ಸಾಗುತ್ತವೆ. ಈ ಛಂದಸ್ಸುಗಳಿಗೆ ಸರಳ ಛಂದಸ್ಸುಗಳೆಂದು ಹೆಸರು.

Iಗಿ ಈ ಗಣ ಎರಡು ಮೊದಲನೆಯ ಸಬಬ್‍ಗಳೂ ಮತ್ತು ಒಂದು ಎರಡನೆಯ ವತದ್(ಇವುಗಳ ಸಂಯೋಜನೆಯಿಂದ ಬರುತ್ತದೆ. ಉದಾಹರಣೆಗೆ,

10 ಮಫ್|ಊ|ಲಾತು=ತನ್|ತನ್|ತನ್‍ನ= ---‰ ಈ ಮೂಲ ಗಣ ತನೇ ಒಂದು ಛಂದಸ್ಸಾಗುವುದಿಲ್ಲ. ಅದು ಬರುವುದು ಇತರ ಗಣಗಳ ಜೊತೆಯಲ್ಲಿ. ಉದಾಹರಣೆಗೆ,
ಮುಸಾತಫ್ ಇಲುನ್, ಮುಸ್‍ತಫ್ ಇಲುನ್, ಮಫ್|ಊ|ಲತು
ತನ್ ತನ್ ತನನ್, ತನ್ ತನ್ ತನನ್, ತನ್ ತನ್ ತನ್‍ನ
- ‰-,   - - ‰-.  - - -‰
ಛಂದಸ್ಸು -ಸರೀ.
ಅಥವಾ
ಮುಸ್‍ತಫ್ ಇಲುನ್, ಮಫ್ |ಊ|ಲಾತು, ಮಸ್‍ತಫ್ ಇಲುನ್
ತನ್ ತನ್ ತನನ್, ತನ್ ತನ್ ತನ್‍ನ, ತನ್ ತನ್ ತನನ್
- - ‰-,   -  - -‰,  - - ‰-

ಛಂದಸ್ಸು-ಮುನ್ ಸರೆಹ್.

ಅರಬ್ಬೀ ಭಾಷೆಯಲ್ಲಿ ಒಟ್ಟು ಹತ್ತೊಂಬತ್ತು ಛಂದಸ್ಸುಗಳಿವೆ. ಇವುಗಳಲ್ಲಿ(ಮೇಲೆ ಹೇಳಿದಂತೆ(ಒಂಬತ್ತಕ್ಕೆ ಸರಳ ಛಂದಸ್ಸುಗಳೆಂದು ಹೆಸರು. ಮಿಕ್ಕ ಹತ್ತು ಛಂದಸ್ಸುಗಳು ರಚಿತವಾಗುವುದು ಮೊದಲನೆಯ ಹತ್ತು ಮೂಲಗಣಗಳಿಂದ ಆಯ್ದು ಕೊಂಡ ಎರಡೆರಡು ಬೇರೆ ಬೇರೆ ಗಣಗಳ ಸಂಯೋಜನೆಯ ಫಲವಾಗಿ, ಈ ಛಂದಸ್ಸುಗಳಿಗೆ ಸಂಯುಕ್ತ ಛಂದಸ್ಸುಗಳೆಂದು ಹೆಸರು.
ಒಂದೊಂದು ಮೂಲಗಣವೂ  ಕೆಲವು ವೇಳೆ ಅಕ್ಷರಗಳನ್ನು ಬಿಟ್ಟುಬಿಡುವುದರಿಂದ ಇನ್ನು ಕೆಲವುವೇಳೆ ಚರಾಕ್ಷರಗಳನ್ನೂ ಸೇರಿಸುವುದರಿಂದ ಅನೇಕ ಬದಲಾವಣೆಗಗಳನ್ನು ಹೊಂದುತ್ತದೆ.  ಉದಾಹರಣೆಗೆ, ಮ ಫಾ ಈ ಲುನ್ = ತನನ್ ತನ್ ತನ್ (ಬಹಾರೆ ಹಜಸ್ ಛಂದಸ್ಸಿನಿಂದ) ಎಂಬುದನ್ನು ಈ ಕೆಳಗಿನ ರೀತಿಗಳಲ್ಲಿ ಮಾರ್ಪಡಿಸಬಹುದು.
1 ತನನ್|ತನನ್ 2 ತನನ್|ತನ್‍ನ 3 ತನನ್|ತನ್ 4 ತನನ್|ತನ್|ತಾನ್
5 ತನನ್ |ತಾನ್ 6 ತನನ್ 7ತನನ್ |ತನ್ 8 ತನ್|ತನ್ |ತಾನ್ 9 ತನ್|ತಾನ್ 10 ತನ್ ತನ್ ಇತ್ಯಾದಿ.
ಮೂಲಗಣಗಳು ಹತ್ತರಲ್ಲೂ ಉಂಟಾಗಬಹುದಾದ ಬದಲಾವಣೆಗಳು ಒಟ್ಟು ಹದಿನಾಲ್ಕು, ಚಮತ್ಕಾರಮಯವು ಸೂಕ್ಷ್ಮವೂ ಆದ ಈ ಕಲೆಯಲ್ಲಿ ಪೂರ್ಣ ಪರಿಶ್ರಮ ಪಡೆಯಲು ಕೆಲವು ದಶಕಗಳ ಸತತ ಪ್ರಯತ್ನ ಅಗತ್ಯ.		      
 (ಎಫ್.ಎಂ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ